ನಿರ್ಗತಿಕ ವಿಧವಾ ವೇತನ ಯೋಜನೆ

 

ನಿರ್ಗತಿಕ ವಿಧವಾ ವೇತನ ಯೋಜನೆ


ಬಡತನ ರೇಖೆಗಿಂತ ಕೆಳಗಿರುವ 18 ರಿಂದ 64 ವರ್ಷದೊಳಗಿನ ನಿರ್ಗತಿಕ ವಿಧವೆಯರಿಗೆ ವಿಧವಾ ವೇತನವನ್ನು ಸರ್ಕಾರದ ಆದೇಶದ ಮೇರೆಗೆ 1ನೇಏಪ್ರಿಲ್ 1984 ರಿಂದ ಕಾರ್ಯಗತ ಮಾಡಲಾಗಿದೆ.


ಅರ್ಹತಾ ಮಾನದಂಡ:

  
1.ನಿರ್ಗತಿಕ ವಿಧವೆ ಅಂದರೆ, ಪತಿಯ ಜೀವಿಸಿಲ್ಲದ ಅಥವಾ ಕಾನೂನು ರೀತ್ಯಾ ಮೃತಪಟ್ಟಿರುವನೆಂದು ಭಾವಿಸುವವನ ಪತ್ನಿ ಮತ್ತು ಅವಳ ಸಂಬಂಧಿಕ ಒಬ್ಬ ಸ್ತ್ರೀ.
2.ವಾರ್ಷಿಕ ಆದಾಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರೂ. 32,000/- ಕ್ಕಿಂತ ಕಡಿಮೆ ಇರಬೇಕು.
3.ಮೃತರಾಗುವವರೆಗೆ ಅಥವಾ ಪುನರ್ವಿವಾಹವಾಗುವವರೆಗೆ ಅಥವಾ ಉದ್ಯೋಗ ಪಡೆದು ನಿಗಧಿತ ವಾರ್ಷಿಕ ಆದಾಯಕ್ಕಿಂತ ಹೆಚ್ಚಿನ ಆದಾಯ ಪಡೆಯುವವರೆಗೆ ವಿಧವೆಯ ವಿಧವಾ ವೇತನವನ್ನು ಪಡೆಯಬಹುದು.

ಈ ಯೋಜನೆಗೆ ಸಲ್ಲಿಸಬೇಕಾದ ದಾಖಲೆಗಳು:

  
1.ವಾಸಸ್ಥಳ ದೃಡೀಕರಣ ಪತ್ರ
2.ವಯಸ್ಸಿನ ದೃಢೀಕರಣ ಪತ್ರ
3.ಬ್ಯಾಂಕ್ ಮತ್ತು ಅಂಚೆ ಖಾತೆ ವಿವರಗಳು
4.ಆಧಾರ್ ಕಾರ್ಡ್

ಪಿಂಚಣಿ ಮೊತ್ತ: 800


ಅರ್ಜಿದಾರರು ವಾಸಸ್ಥಳ ಕೇಂದ್ರದ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.



ಗಂಗಾ ಕಲ್ಯಾಣ ನಿರಾವರಿ ಯೋಜನೆ

Post a Comment (0)
Previous Post Next Post