ಇಂದಿರಾ ಗಾಂಧಿ ರಾಷ್ಟ್ರೀಯ

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ

ಬಡತನ ರೇಖೆಗಿಂತ ಕೆಳಗಿರುವ 60 ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರೀಕರಿಗೆ ಈ ಯೋಜನೆಯಡಿ ಮಾಸಾಶನವನ್ನು ನೀಡಲಾಗುತ್ತಿದೆ. ಈ ಯೋಜನೆಯನ್ನು ದಿನಾಂಕ:1-1-1965 ರಿಂದ ಮಾಸಾಶನವನ್ನುಪ್ರಾರಂಭಿಸಲಾಗಿದೆ.


ಅರ್ಹತಾ ಮಾನದಂಡ:
  
1.
ಫಲಾನುಭವಿಗಳು 60 ವರ್ಷ ಹಾಗೂ ಮೇಲ್ಪಟ್ಟ ವಯಸ್ಸುಳ್ಳವರಾಗಿರಬೇಕು.ಅವರು ಬಡತನ ರೇಖೆಗಿಂತ (ಬಿಪಿಎಲ್) ಕೆಳಗಡೆ ಇರಬೇಕು.
2.
ವಾರ್ಷಿಕ ಆದಾಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರೂ.32,000/- ಕ್ಕಿಂತ ಕಡಿಮೆ ಇರಬೇಕು.
3.
ಅಂತಹ ವ್ಯಕ್ತಿಯು ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆಯಡಿ ಯಾವುದೇ ತರಹದ ಪಿಂಚಣಿ ಇತ್ಯಾದಿಗಳನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತ್ತಿರಬಾರದು.
4.
ಫಲಾನುಭವಿಗಳಿಗೆ ಗಂಡು ಮಕ್ಕಳು ಇದ್ದಾಗ್ಯೂ ಅವರು ಫಲಾನುಭವಿಗಳನ್ನು ಘೋಷಿಸದೇ ಇದ್ದಲ್ಲಿ ಈ ಮಾಸಾಶನವನ್ನು ಪಡೆಯಬಹುದಾಗಿದೆ.
5.
ಜನನ ಪ್ರಮಾಣ ಪತ್ರ, ವೈದ್ಯಕೀಯ ದೃಢೀಕರಣ ಪತ್ರ ಅಥವಾ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಯಾಗಿರುತ್ತದೆ.

ಈ ಯೋಜನೆಗೆ ಸಲ್ಲಿಸಬೇಕಾದ ದಾಖಲೆಗಳು:
  
1.
ವಾಸಸ್ಥಳ ದೃಡೀಕರಣ ಪತ್ರ
2.
ವಯಸ್ಸಿನ ದೃಢೀಕೃತ ದಾಖಲೆ
3.
ಬ್ಯಾಂಕ್ ಮತ್ತು ಅಂಚೆ ಖಾತೆ ವಿವರಗಳು
4.
ಆಧಾರ್ ಕಾರ್ಡ್

ಪಿಂಚಣಿ ಮೊತ್ತ:
  
1.
60 ರಿಂದ 64 ವರ್ಷದೊಳಗಿನ ಹಿರಿಯ ನಾಗರೀಕರಿಗೆ
600
2.
65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ
1200

ಅರ್ಜಿದಾರರು ವಾಸಸ್ಥಳ ವ್ಯಾಪ್ತಿಯ ಅಟಲ್‌ ಜೀ ಜನಸ್ನೇಹಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.


Post a Comment (0)
Previous Post Next Post